
ದಕ್ಷತೆ ಮತ್ತು ಸುಸ್ಥಿರ ಆವಿಷ್ಕಾರದ ಸಂಭ್ರಮಾಚರಣೆಯಲ್ಲಿ ಅಮೆರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್(ಎ.ಎಸ್.ಎಂ.ಇ.)ನ ಸೇವಾ ಅಂಗವಾದ ಎ.ಎಸ್.ಎಂ.ಇ ಫೌಂಡೇಷನ್ ಇಂಡಿಯಾ, ರೇವಾ ಯೂನಿವರ್ಸಿಟಿ ಸಹಯೋಗದಲ್ಲಿ ಇ.ಎಫ್.ಎಕ್ಸ್. ಇಂಡಿಯಾ 2025 (EFx India 2025)ಕ್ಕೆ ದೇಶದ ಅತ್ಯಂತ ಉಜ್ವಲ ಎಂಜಿನಿಯರಿಂಗ್ ಮನಸ್ಸುಗಳನ್ನು ಒಟ್ಟಿಗೆ ತಂದಿದೆ. ಈ ಮೂರು ದಿನಗಳ ಉತ್ಸವವು ಮಾರ್ಚ್ 27ರಿಂದ 28ರವರೆಗೆ ನಡೆಯುತ್ತಿದ್ದು ಭಾರತದಾದ್ಯಂತ ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದು ಅವರಿಗೆ ತಮ್ಮ ತಾಂತ್ರಿಕ ಪರಿಣಿತಿಯನ್ನು ಪ್ರದರ್ಶಿಸಲು, ಅತ್ಯಂತ ತೀವ್ರ ಸವಾಲುಗಳಲ್ಲಿ ಸ್ಪರ್ಧಿಸಲು ಮತ್ತು ಎಂಜಿನಿಯರಿಂಗ್ ಭವಿಷ್ಯವನ್ನು ರೂಪಿಸುವಲ್ಲಿ ಉದ್ಯಮದ ನಾಯಕರೊಂದಿಗೆ ಸಕ್ರಿಯರಾಗಲು ಅವಕಾಶ ಕಲ್ಪಿಸಿದೆ.
ಬೋಯಿಂಗ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಚೀಫ್ ಎಂಜಿನಿಯರ್ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಮಾರಿಯಾ ಕಾರ್ಡ್ವೆಲ್ ಭಾರತದ ಎಂಜಿನಿಯರ್ ಗಳ ಮೇಲೆ ಇರಿಸಿದ ಹೆಚ್ಚಿನ ನಿರೀಕ್ಷೆಯ ಕುರಿತು ಒತ್ತಿ ಹೇಳಿದರು. “ಬೇಡಿಕೆಯು ಅಪಾರವಾಗಿದೆ ಮತ್ತು ಒತ್ತಡವು ಯುವ ಎಂಜಿನಿಯರ್ ಗಳು ಅವರ ಕಲೆಯನ್ನು ರೂಪಿಸಿಕೊಳ್ಳುವ ವಿಧಾನವನ್ನು ತೋರುತ್ತದೆ- ರಾಜಿ, ಸಂಧಾನ ಮತ್ತು ಪೂರಕ ಯಶಸ್ಸು ಮಹತ್ತರ ಆವಿಷ್ಕಾರದ ಪ್ರಯಾಣದ ಭಾಗವಾಗಿದೆ. ನೀವು ಉದ್ಯೋಗಪಡೆಯಲ್ಲಿರುವಾಗ ಸೋಲಿಗೆ ಅವಕಾಶ ಕಡಿಮೆ ಇರುತ್ತದೆ. ಆದ್ದರಿಂದಲೇ ಎ.ಎಸ್.ಎಂ.ಇ., ಬೋಯಿಂಗ್ ಮತ್ತಿತರರು ಇ.ಎಫ್.ಎಕ್ಸ್.ನಂತಹ ಉಪಕ್ರಮಗಳಲ್ಲಿ ಹೂಡಿಕೆ ಮಾಡುತ್ತಾರೆ” ಎಂದರು.
ಆವಿಷ್ಕಾರ ಮತ್ತು ಸಹಯೋಗದ ಮೂಲಕ ಎಂಜಿನಿಯರ್ ಗಳ ಸಬಲೀಕರಣ
ಎ.ಎಸ್.ಎಂ.ಇ.ಯ ಪ್ರಮುಖ ವಿದ್ಯಾರ್ಥಿ ಸಕ್ರಿಯತೆಯ ಉಪಕ್ರಮಗಳಲ್ಲಿ ಇ.ಎಫ್.ಎಕ್ಸ್. ಕಳೆದ ಏಳು ವರ್ಷಗಳಿಂದ 20 ನಗರಗಳ 400 ಶಿಕ್ಷಣ ಸಂಸ್ಥೆಗಳ 10,000ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಕರ್ಷಿಸಿದ್ದು ಎಂಜಿನಿಯರಿಂಗ್ ಪ್ರತಿಭೆಯಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರ ಎಂಬ ಪ್ರತಿಷ್ಠೆಯನ್ನು ಮರು ದೃಢೀಕರಿಸಿದೆ.
ಈ ವರ್ಷದ ಆವೃತ್ತಿಯು ಸ್ಪರ್ಧೆಯ ಆಚೆಗೂ ವಿಸ್ತರಿಸಿದ್ದು ಬಯೊಮಿಮಿಕ್ರಿ, ಜಿಡಿ ಅಂಡ್ ಟಿ ಇನ್ ಎಂಜಿನಿಯರಿಂಗ್, ವೆಲ್ಡಿಂಗ್ ಅಂಡ್ ಎನ್.ಡಿ.ಇ. ಅಪ್ಲಿಕೇಷನ್ಸ್, ರಿಮೋಟ್ ಇಮೇಜ್ ಫಾರ್ ಮೆಟೀರಿಯಲ್ ಅಸೆಸ್ಮೆಂಟ್ ಮತ್ತು ಸಸ್ಟೇನಬಲ್ ಎಂಜಿನಿಯರಿಂಗ್ ನಂತಹ ಅತ್ಯಾಧುನಿಕ ವಿಷಯಗಳ ಮೇಲೆ ಪರಿಣಿತರ ನೇತೃತ್ವದ ಮಾಸ್ಟರ್ ಕ್ಲಾಸ್ ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಉದ್ಯಮದ ಸೂಕ್ಷ್ಮ ಒಳನೋಟಗಳು ಮತ್ತು ಪ್ರಾಯೋಗಿಕ ಪರಿಣಿತಿ ನೀಡಲಿದೆ.
“ಇ.ಎಫ್.ಎಕ್ಸ್. ಅನುಭವಪೂರ್ವಕ ಕಲಿಕೆಯನ್ನು ಮರು ಉತ್ತೇಜಿಸಲು ಎರಡು ವರ್ಷಗಳ ನಂತರ ಮರಳಿ ಬಂದಿದೆ” ಎಂದು ಎ.ಎಸ್.ಎಂ.ಇ. ಇಂಡಿಯಾ ಪ್ರೈ.ಲಿ.ಯ ಅಧ್ಯಕ್ಷ ಶ್ರೀ ಮಧುಕರ್ ಶರ್ಮಾ ಹೇಳಿದರು. ಅವರು, “ಎಂಜಿನಿಯರಿಂಗ್ ಎಂದರೆ ಬರೀ ತಾಂತ್ರಿಕ ಕೌಶಲ್ಯಗಳಲ್ಲ- ಇದು ಸದೃಢತೆ, ಸಹಯೋಗ ಮತ್ತು ನಿಜ ಜೀವನದ ಮಿತಿಗಳನ್ನು ಮೀರುವುದು. ಇಲ್ಲಿ ವಿದ್ಯಾರ್ಥಿಗಳು ಬರೀ ಕಲಿಯುವುದಿಲ್ಲ, ಅವರು ಆವಿಷ್ಕರಿಸುತ್ತಾರೆ, ವಿಫಲರಾಗುತ್ತಾರೆ ಮತ್ತು ಅಂತಿಮವಾಗಿ ಯಶಸ್ವಿಯಾಗುತ್ತಾರೆ” ಎಂದರು.
ರೇವಾ ಯೂನಿವರ್ಸಿಟಿಯ ಸಂಸ್ಥಾಪಕ ಮತ್ತು ಕುಲಾಧಿಪತಿ ಡಾ.ಪಿ. ಶ್ಯಾಮರಾಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನಸ್ಥಿತಿಯನ್ನು ಬೆಳೆಸುವ ಪ್ರಾಮುಖ್ಯತೆಗೆ ಒತ್ತು ನೀಡಿದರು. “ನಾನು ಸದಾ ವಿದ್ಯಾರ್ಥಿಗಳು ನಿಜ ಜೀವನದ ಅನುಭವ ಪಡೆದುಕೊಳ್ಳಬೇಕೆಂದು ಬಯಸುತ್ತೇನೆ. ಇ.ಎಫ್.ಎಕ್ಸ್. ಸ್ಪರ್ಧೆಗಳು ತರಗತಿಯ ಹಾಗೂ ಲ್ಯಾಬ್ ಪ್ರಾಜೆಕ್ಟ್ ಗಳ ಆಚೆಗೂ ವಿಸ್ತರಿಸಿದ್ದು ಪ್ರಾಯೋಗಿಕ ಕಲಿಕೆ ನೀಡುತ್ತವೆ. ಎ.ಎಸ್.ಎಂ.ಇ. ಇಂಡಿಯಾ ಮತ್ತು ಎ.ಎಸ್.ಎಂ.ಇ. ಇಂಡಿಯಾ ಫೌಂಡೇಷನ್ ಗೆ ಈ ಅವಕಾಶ ಕಲ್ಪಿಸಿದ್ದಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನನ್ನ ವಿದ್ಯಾರ್ಥಿಗಳು ಉದ್ಯೋಗ ನಿರೀಕ್ಷಿಸುವವರಲ್ಲ, ಉದ್ಯೋಗ ನೀಡುವವರಾಗಬೇಕು. ವಿಶ್ವವಿದ್ಯಾಲಯಗಳು ಸಂಶೋಧನೆ, ಶೈಕ್ಷಣಿಕತೆ ಮತ್ತು ಉದ್ಯಮದ ನಡುವೆ ಸಹಯೋಗ ರೂಪಿಸಿಕೊಂಡು ಪ್ರಾಯೋಗಿಕ ಅರಿವು ನೀಡಿದರೆ ಉದ್ಯೋಗದಾತರನ್ನು ಉತ್ಪಾದಿಸುವ ನನ್ನ ಗುರಿ ಸಾಕಾರವಾಗುತ್ತದೆ ಎಂದು ನಾನು ನಂಬಿದ್ದೇನೆ” ಎಂದರು.
ಭಾರತೀಯ ಎಂಜಿನಿಯರಿಂಗ್ ನ ಮುಂದಿನ ಘಟ್ಟ
ಎ.ಎಸ್.ಎಂ.ಇ. ಫೌಂಡೇಷನ್ ಇಂಡಿಯಾ ಸ್ಪಷ್ಟ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ: ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಅಂತರ ತುಂಬುವ ಮೂಲಕ ಎಂಜಿನಿಯರಿಂಗ್ ಶಿಕ್ಷಣಕ್ಕೆ ಮತ್ತು ಉದ್ಯೋಗಾವಕಾಶಗಳಿಗೆ ಸಮಾನ ಲಭ್ಯತೆ ನೀಡುವುದು. ಇದರ ಉಪಕ್ರಮಗಳು ಮೂರು ಆಧಾರಸ್ತಂಭಗಳ ಮೇಲೆ ನಿಂತಿವೆ:
“ಎ.ಎಸ್.ಎಂ.ಇ. ಫೌಂಡೇಷನ್ ಇಂಡಿಯಾ ಮುಂದಿನ ತಲೆಮಾರಿನ ಎಂಜಿನಿಯರ್ ಗಳ ಸಬಲೀಕರಣಕ್ಕೆ ಬದ್ಧವಾಗಿದೆ” ಎಂದು ಎ.ಎಸ್.ಎಂ.ಇ. ಫೌಂಡೇಷನ್ ಇಂಡಿಯಾದ ಡೆಪ್ಯುಟಿ ಡೈರೆಕ್ಟರ್ ಅವ್ನಿ ಮಲ್ಹೋತ್ರಾ ಹೇಳಿದರು. “ಇ.ಎಫ್.ಎಕ್ಸ್. ಸ್ಪರ್ಧೆಗಳು, ವಿದ್ಯಾರ್ಥಿ ಉಪಕ್ರಮಗಳು ಮತ್ತು ಸೇವಾ ಕಾರ್ಯಕ್ರಮಗಳ ಮೂಲಕ ನಾವು ಯುವ ಪ್ರತಿಭೆಗಳನ್ನು ಜಾಗತಿಕ ಸವಾಲುಗಳನ್ನು ಎದುರಿಸಲು ಅಗತ್ಯ ಕೌಶಲ್ಯಗಳೊಂದಿಗೆ ಸನ್ನದ್ಧರಾಗಿಸುತ್ತಿದ್ದೇವೆ” ಎಂದರು.
ರೇವಾ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಡಾ.ನಾರಾಯಣಸ್ವಾಮಿ ಕೆ.ಎಸ್. ಅವರು, “ನಿಜ ಜೀವನದ ಸಮಸ್ಯೆಗಳು ವೃತ್ತಿಪರ ಪರಿಹಾರಗಳನ್ನು ಬೇಡುತ್ತವೆ. ಎಂಜಿನಿಯರಿಂಗ್ ಶ್ರೇಷ್ಠತೆಗೆ ಎ.ಎಸ್.ಎಂ.ಇ.ಯ ಸರಿಸಾಟಿ ಇರದ ಬದ್ಧತೆಯು ಮಹತ್ತರ ವ್ಯತ್ಯಾಸ ತರಲಿದೆ” ಎಂದರು.
ಆವಿಷ್ಕಾರವನ್ನು ತನ್ನ ಕೇಂದ್ರವಾಗಿಸಿಕೊಂಡು ಇ.ಎಫ್.ಎಕ್ಸ್. ಇಂಡಿಯಾ 2025 ಎಂಜಿನಿಯರಿಂಗ್ ನ ಪರಿವರ್ತನೀಯ ಶಕ್ತಿಗೆ ಸಾಕ್ಷಿಯಾಗಿದ್ದು ತಾಂತ್ರಿಕ ಶ್ರೇಷ್ಠತೆ ಸಾಮಾಜಿಕ ಪರಿಣಾಮವನ್ನು ಮುಟ್ಟುವ ಭವಿಷ್ಯವನ್ನು ರೂಪಿಸುತ್ತದೆ.
About ASME Foundation India
The ASME Foundation India is an independent philanthropic organisation supported by the American Society of Mechanical Engineers, that convenes an array of programs in three core fields in Engineering: engineering education, career engagement, and global development. With the goal of empowering tomorrow's technical workforce, the ASME Foundation India advances equitable access both to professional opportunities and to engineering innovations that improve quality of life. For more details, visit https://asmefoundationindia.org/
About REVA University:
Established in 2012, REVA University is a forerunner in delivering technology-based education. Recognised as one of the Top 50 private universities in India, REVA University, with innovative pedagogy, exemplary infrastructure, and an industry-resilient curriculum that is designed for the future job market, strives to benchmark new milestones in modern education. In less than two decades, the University has grown from a small community of 150 students to a vast institution that is educating and empowering 15,000+ students on campus.
###