ರೆವಾ ಯೂನಿವರ್ಸಿಟಿಯಲ್ಲಿ ನಡೆದ ಡ್ರೋನ್ ತಂತ್ರಜ್ಞಾನದ ಕುರಿತಾದ ಎ.ಎಸ್.ಎಂ.ಇ. ಎಂಜಿನಿಯರಿಂಗ್ ಶಿಕ್ಷಣದ ವಿಚಾರ ಸಂಕಿರಣದಲ್ಲಿ ಉದ್ಯಮಕ್ಕೆ ಸನ್ನದ್ಧ ಎಂಜಿನಿಯರಿಂಗ್ ಕಲಿಕೆಗೆ ಒತ್ತು
Date -
February 17, 2025
A close-up of a logoAI-generated content may be incorrect.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಮಿಟ್(MEEd) ಭಾಗವಾಗಿ ರೆವಾ ಯೂನಿವರ್ಸಿಟಿಯಲ್ಲಿ ಡ್ರೋನ್ ತಂತ್ರಜ್ಞಾನದ ಎ.ಎಸ್.ಎಂ.ಇ. ಎಂಜಿನಿಯರಿಂಗ್ ಶಿಕ್ಷಣ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ನಡೆಸಲಾಗಿದ್ದು ಇದು ತರಗತಿಯ ಕಲಿಕೆ ಮತ್ತು ಉದ್ಯಮದ ನೇತೃತ್ವದ ಡ್ರೋನ್ ಬಳಕೆಯ ನಡುವಿನ ಅಂತರ ತುಂಬಲು ಆದ್ಯತೆ ನೀಡಿತ್ತು. ವೈಮಾನಿಕ, ಉತ್ಪಾದನೆ ಮತ್ತು ಡೀಪ್-ಟೆಕ್ ಆವಿಷ್ಕಾರದ ವೃದ್ಧಿಸುತ್ತಿರುವ ಕೇಂದ್ರವಾದ ಬೆಂಗಳೂರಿನಲ್ಲಿ ಆಯೋಜಿಸಲಾದ ಈ ವಿಚಾರ ಸಂಕಿರಣವು ನಿಜ-ಜೀವನದ ಬಳಕೆ, ನಿಯಂತ್ರಣದ ಅಗತ್ಯಗಳು ಮತ್ತು ಡ್ರೋನ್ ಇಕಿಸೊಸ್ಟಂನಲ್ಲಿ ಉದ್ಯಮ ಪ್ರೇರಿತ ಬಳಕೆಯ ಪ್ರಕರಣಗಳಿಗೆ ಪೂರಕವಾಗಿ ಹೇಗೆ ಎಂಜಿನಿಯರಿಂಗ್ ಶಿಕ್ಷಣವು ವಿಕಾಸಗೊಳ್ಳಬೇಕು ಎನ್ನುವುದಕ್ಕೆ ಆದ್ಯತೆ ನೀಡಿತು. 

ಎ.ಎಸ್.ಎಂ.ಇ. ಫೌಂಡೇಷನ್ ಇಂಡಿಯಾ ಆಯೋಜಿಸಿದ ಈ ವಿಚಾರ ಸಂಕಿರಣವು ಡ್ರೋನ್ ತಂತ್ರಜ್ಞಾನವನ್ನು ಸ್ವತಂತ್ರ ತಾಂತ್ರಿಕ ಕೌಶಲ್ಯ ಎನ್ನುವುದರ ಬದಲಿಗೆ ಏಕೀಕೃತ, ಬಹುಶಿಸ್ತೀಯ ವ್ಯವಸ್ಥೆಯಾಗಿ ಒತ್ತು ನೀಡಿತು. ಮೂಲಭೂತ ಡ್ರೋನ್ ಜೋಡಣೆಯು ಹೆಚ್ಚಾಗಿರುವುದರ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣವು ಯಾಂತ್ರಿಕ ವಿನ್ಯಾಸ, ಎಲೆಕ್ಟ್ರಿಕಲ್ ಸಿಸ್ಟಂಗಳು, ಡಿಜಿಟಲ್ ಇಂಟೆಲಿಜೆನ್ಸ್ ಮತ್ತು ವ್ಯಾಪಾರ ತಿಳಿವಳಿಕೆಯನ್ನು ರಕ್ಷಣೆ, ಕೃಷಿ, ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಡ್ರೋನ್ ಉತ್ಪಾದನೆ, ಪರೀಕ್ಷೆ, ಕಾರ್ಯಾಚರಣೆಗಳು ಮತ್ತು ಕ್ಷೇತ್ರದಲ್ಲಿ ಅಳವಡಿಕೆಯಲ್ಲಿ ವೃತ್ತಿಗಳನ್ನು ನಿರ್ಮಿಸಲು ಆದ್ಯತೆ ನೀಡಿತು.

ಈ ವಿಚಾರ ಸಂಕಿರಣ ಕುರಿತು ಎ.ಎಸ್.ಎಂ.ಇ. ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಮತ್ತು ನಿರ್ದೇಶಕ ಶ್ರೀ ಮಧುಕರ್ ಶರ್ಮಾ, ಎಂಇಇಡಿ ಮತ್ತು ಐಎಂಇಸಿಇಯಂತಹ ಪ್ಲಾಟ್ ಫಾರಂಗಳು ಎಂಜಿನಿಯರಿಂಗ್ ಶಿಕ್ಷಣವನ್ನು ಪ್ರಸ್ತುತದ ಎಂಜಿನಿಯರಿಂಗ್ ರೂಢಿಯ ವಾಸ್ತವಗಳಿಗೆ ಅನುಗುಣವಾಗಿ ಸಜ್ಜುಗೊಳಿಸುತ್ತಿವೆ. “ಎ.ಎಸ್.ಎಂ.ಇ. ಲಾಭರಹಿತ, ಸದಸ್ಯರಿಂದ ನಡೆಯುವ ಜಾಗತಿಕ ಎಂಜಿನಿಯರಿಂಗ್ ಸೊಸೈಟಿಯಾಗಿದ್ದು ಕೈಗಾರಿಕೆಗೆ ಪ್ರಸ್ತುತವಾದ ಕಲಿಕೆ ಮತ್ತು ಜವಾಬ್ದಾರಿಯುತ ಆವಿಷ್ಕಾರ ಉತ್ತೇಜಿಸಲು ಬದ್ಧವಾಗಿದೆ” ಎಂದು ಶರ್ಮಾ  ಹೇಳಿದರು. “ಎಂಇಇಡಿಯಂತಹ ಉಪಕ್ರಮಗಳು ಮತ್ತು ಐಎಂಇಸಿಇ ರೀತಿಯ ಜಾಗತಿಕ ಪ್ಲಾಟ್ ಫಾರಂಗಳು ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಟ್ಟಿಗೆ ತಂದು ಭವಿಷ್ಯ ಸನ್ನದ್ಧ ಎಂಜಿನಿಯರ್ ಗಳನ್ನು ರೂಪಿಸುತ್ತಿವೆ. ಭಾರತವು ಮೊಟ್ಟಮೊದಲ ಬಾರಿಗೆ ಯು.ಎಸ್. ಹೊರಗಡೆ ಐಎಂಇಸಿಇ ಆಯೋಜಿಸುತ್ತಿರುವುದು ಜಾಗತಿಕ ಎಂಜಿನಿಯರಿಂಗ್ ಇಕೊಸಿಸ್ಟಂಗೆ ದೇಶದ ವೃದ್ಧಿಸುತ್ತಿರುವ ಕೊಡುಗೆಯನ್ನು ಬಿಂಬಿಸುತ್ತದೆ. ನಾವು ಈ ಸೆಪ್ಟೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆಯಲಿರುವ ಎ.ಎಸ್.ಎಂ.ಇ. ಐಎಂಇಸಿಇ ಇಂಡಿಯಾದ ಮುಂದಿನ ಆವೃತ್ತಿಗಾಗಿ ಎದುರು ನೋಡುತ್ತಿದ್ದೇವೆ” ಎಂದರು.

ಈ ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಫೌಂಡೇಷನ್ ಕೆಲಸಕ್ಕೆ ತಕ್ಕುದಾದ ಹಿನ್ನೆಲೆಯನ್ನು ಒದಗಿಸಿದ ಎ.ಎ್.ಎಂ.ಇ. ಫೌಂಡೇಷನ್ ಇಂಡಿಯಾದ ಡೆಪ್ಯುಟಿ ಡೈರೆಕ್ಟರ್ ‍ಶ್ರೀಮತಿ ಅವ್ನಿ ಮಲ್ಹೋತ್ರಾ ಬಳಕೆಯ ಪ್ರೇರಿತ ಎಂಜಿನಿಯರಿಂಗ್ ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿ ಹೇಳಿದರು. “ಎ.ಎಸ್.ಎಂ.ಇ. ಫೌಂಡೇಷನ್ ಇಂಡಿಯಾದಲ್ಲಿ ನಮ್ಮ ಆದ್ಯತೆಯು ಎಂಜನಿಯರಿಂಗ್ ಶಿಕ್ಷಣವು ನಿಜ ಜೀವನದ ಪರಿಣಾಮವಾಗಿ ಬದಲಾಗುವುದಕ್ಕೆ ಅದರಲ್ಲಿಯೂ ಮುಖ್ಯವಾಗಿ ಲಭ್ಯತೆ ಮತ್ತು ಅವಕಾಶ ಸೀಮಿತವಾಗಿರುವುದಕ್ಕೆ ನಾವು ಆದ್ಯತೆ ನೀಡಿದ್ದೇವೆ” ಎಂದು ಮಲ್ಹೋತ್ರಾ ಹೇಳಿದರು. “ಎಂಇಇಡಿಯಂತಹ ಉಪ್ರಮಗಳ ಮೂಲಕ ನಾವು ಉದ್ಯಮದ ವಾಸ್ತವಗಳು, ಸಮಾಜದ ಸವಾಲುಗಳು ಮತ್ತು ಆವಿಷ್ಕಾರಕ ಮಾರ್ಗಗಳನ್ನು ಸಂಪರ್ಕಿಸಲು ಶ್ರಮಿಸುತ್ತೇವೆ, ಇದರಿಂದ ತಂತ್ರಜ್ಞಾನವನ್ನು ಪ್ರತ್ಯೇಕವಾಗಿ ಅಲ್ಲ, ಬದಲಿಗೆ ಉದ್ದೇಶ ಮತ್ತು ಪ್ರಸ್ತುತತೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ” ಎಂದರು. 

ವಿದ್ಯಾರ್ಥಿಗಳನ್ನು ತೀವ್ರವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲು ಉದ್ಯಮದ ತಿಳಿವಳಿಕೆ ಕುರಿತು ಒತ್ತು ನೀಡಿದ ರೆವಾ ಯೂನಿವರ್ಸಿಟಿಯ ಸಮ ಕುಲಪತಿ ಡಾ.ಕೆ.ಎಸ್.ನಾರಾಯಣ ಸ್ವಾಮಿ, “ಎ.ಎಸ್.ಎಂ.ಇ. ಎಂಇಇಡಿ ಕಾರ್ಯಕ್ರಮದಂತಹ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿರಲು ಮತ್ತ ತಾಂತ್ರಿಕವಾಗಿ ಸಂಚಲನ ಸೃಷ್ಟಿಸಲು ನೆರವಾಗುತ್ತವೆ. ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಸಂವಹನ ಕೌಶಲ್ಯಗಳು ಮತ್ತು ಅಳವಡಿಸಿಕೊಳ್ಳಬಲ್ಲತೆ ನಿರ್ಮಿಸಿಕೊಳ್ಳಬೇಕು, ಅಲ್ಲದೆ ವಿಕಾಸಗೊಳ್ಳುತ್ತಿರುವ ನಿರೀಕ್ಷೆಗಳು ಮತ್ತು ಮುಂದಿನ ಉದ್ಯೋಗದ ಮಾರ್ಗಗಳನ್ನು ಅನ್ವೇಷಿಸಲು ಉದ್ಯಮದೊಂದಿಗೆ ಹತ್ತಿರದ ಬಾಂಧವ್ಯ ಹೊಂದಿರಬೇಕು” ಎಂದರು. 

ಈ ವಿಚಾರ ಸಂಕಿರಣವು ಭಾರತದ ವೃದ್ಧಿಸುತ್ತಿರುವ ಡ್ರೋನ್ ವೈಮಾನಿಕ ಕ್ಷೇತ್ರದ ಉದ್ಯಮದ ನಾಯಕರಾದ ಜನರಲ್ ಏರೊನಾಟಿಕ್ಸ್ ಪ್ರೈ.ಲಿ.ಯ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀ ಅಭಿಷೇಕ್ ಶರ್ಮಾ; ಎನ್ಕಾರ್ಡ್ ಸಹ-ಸಂಸ್ಥಾಪಕ ಮತ್ತು ಸಿಒಒ ಶ್ರೀ ಝೈನ್ ಸಯೀದ್; ಎನ್.ಎ.ಎಲ್.ನ ಸಿವಿಲ್ ಏರ್ ಕ್ರಾಫ್ಟ್ಸ್ ಕಾರ್ಯಕ್ರಮ ನಿರ್ದೇಶಕ ಮತ್ತು ಏರೊಸ್ಪೇಸ್ ಎಲೆಕ್ಟ್ರಾನಿಕ್ಸ್ ಡಿವಿಷನ್ ಮುಖ್ಯಸ್ಥ ಡಾ.ಆನಂದ ಸಿ.ಎಂ. ಮತ್ತು ಐಡಿಯಾಫೋರ್ಜ್ ಟೆಕ್ನಾಲಜೀಸ್ ಇಂಕ್.ನ ಆರ್ ಅಂಡ್ ಡಿ ಟೆಕ್ನಿಕಲ್ ಲೀಡ್ ಡಾ.ಸುಬ್ರತಾ ನಾಯಕ್ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಡ್ರೋನ್ ಗಳು ಪರಿಕಲ್ಪನೆಯಿಂದ ನೈಜ-ಜಗತ್ತಿನ ಬಳಕೆಗೆ ಒಳಪಡುತ್ತವೆ ಎನ್ನುವುದನ್ನು ವಿವರಿಸಿದರು, ಇದರೊಂದಿಗೆ ವಿನ್ಯಾಸದ ನಿರ್ಧಾರಗಳು, ಉತ್ಪಾದನಾ ಪ್ರಕ್ರಿಯೆಗಳು ಮತ್ತು ಪ್ರಮಾಣೀಕರಣದ ಅಗತ್ಯಗಳು ಮತ್ತು ಅಳವಡಿಕೆಯ ಸವಾಲುಗಳು ಮತ್ತು ನಿಯಂತ್ರಣದ ಚೌಕಟ್ಟು ಕುರಿತು ವಿವರಿಸಿದರು. ಈ ಚರ್ಚೆಗಳು ಸುಸ್ಥಿರ ಯುಎವಿ ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ತಾಂತ್ರಿಕ ಪರಿಣಿತಿ ಮತ್ತು ಕಾರ್ಯ ನಿರ್ವಹಣೆಯ ಕೌಶಲಗಳ ಸಂಯೋಜನೆಯನ್ನು ಎತ್ತಿ ತೋರಿಸಿತು.

ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಪ್ರೊಫೆಸರ್ ಡಾ.ಎಂ. ಸಿವಪ್ರಗಸಂ ಮತ್ತು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಂಜಿನಿಯರಿಂಗ್ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಮುಖ್ಯಸ್ಥ ಡಾ.ಮಂಜುನಾಥ್ ಎಸ್.ವಿ. ಶೈಕ್ಷಣಿಕ ಒಳನೋಟಗಳನ್ನು ಹಂಚಿಕೊಂಡರು. ಅವರು ಉದ್ಯಮದ ನಿರೀಕ್ಷೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಪಠ್ಯಕ್ರಮ ಇರಬೇಕು ಮತ್ತು ಎಂಜಿನಿಯರಿಂಗ್ ಕೋರ್ಸ್ ಒಳಗಡೆ ಅನುಭವಪೂರ್ವಕ ಕಲಿಕೆ ಇರಬೇಕು ಎಂದರು.

ಈ ವಿಚಾರ ಸಂಕಿರಣದಲ್ಲಿ ಅನ್ಸಿಸ್ ಸಿಮ್ಯುಲೇಷನ್ ಬಳಸಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಾಯೋಗಿಕ ಕಾರ್ಯಾಗಾರವಿತ್ತು, ಇದನ್ನು ಇನ್ಫಿನಿಪಾಯಿಂಟ್ ಟೆಕ್ನಾಜೀಸ್ ಪ್ರೈ.ಲಿ.ಯ ಟೆಕ್ನಿಕಲ್ ಅಕೌಂಟ್ ಮ್ಯಾನೇಜರ್ ಶ್ರೀ ಗೋಕುಲ್ ರಾಜ್ ನಡೆಸಿಕೊಟ್ಟರು ಮತ್ತು ಸಿನಾಪ್ಸಿಸ್ ಭಾಗವಾಗಿ ಅನ್ಸಿಸ್ ನೆರವಾಯಿತು. ಈ ಕಾರ್ಯಾಗಾರವು ಡಿಸೈನ್ ವ್ಯಾಲಿಡೇಷನ್ ನಿಂದ ಆಪರೇಷನಲ್ ಪ್ಲಾನಿಂಗ್ ವರೆಗೆ ಹೇಗೆ ಸಿಮ್ಯುಲೇಷನ್ ಸಾಧನಗಳು ಮತ್ತು ಎಐ-ಸನ್ನದ್ಧ ಯುಎವಿ ವರ್ಕ್ ಫ್ಲೋಗಳನ್ನು ನೈಜ ಎಂಜಿನಿಯರಿಂಗ್ ಪರಿಸರಗಳಿಗೆ ಬಳಸಲಾಗುತ್ತದೆ ಎನ್ನುವುದರ ಪ್ರಾಯೋಗಿಕ ನೋಟ ನೀಡಿತು. ಈ ಕಾರ್ಯಕ್ರಮದಲ್ಲಿ ಎರಡು ಕಾರ್ಯಾಗಾರಗಳನ್ನು ಆಯೋಜಿಸಲಾಗಿದ್ದು ಎನೇಬ್ಲಿಂಗ್ ನೆಕ್ಸ್ಟ್-ಜನರೇಷನ್ ಆಟೊನಮಸ್ ಸಿಸ್ಟಂ ವರ್ಕ್ ಫ್ಲೋಸ್: ಫ್ರಂ ಡಿಸೈನ್ ಟು ಡಿಪ್ಲಾಯ್ಮೆಂಟ್ ಅನ್ನು ಮ್ಯಾಥ್ ವರ್ಕ್ಸ್ ಆಯೋಜಿಸಿದ್ದು ಮ್ಯಾಥ್ ವರ್ಕ್ಸ್ ನಲ್ಲಿ ಅಪ್ಲಿಕೇಷನ್ ಎಂಜಿನಿಯರ್ ಶ್ರೀಮತಿ ರಿಚಾ ಸಿಂಗ್ ನಡೆಸಿಕೊಟ್ಟರು ಮತ್ತು ಎ.ಎಸ್.ಎಂ.ಇ. ಸೈಬರ್ ಫಿಸಿಕಲ್ ಸಿಸ್ಟಮ್ಸ್ ಇಂಡಿಯಾ ಆಯೋಜಿಸಿದ್ದ ಫಿಸಿಕ್ಸ್-ಇನ್ಫಾರ್ಮ್ಡ್ ಮೆಷಿನ್ ಲರ್ನಿಂಗ್ ಫಾರ್ ಡ್ರೋನ್/ಯುಎವಿಯನ್ನು ಏರ್ ಬಸ್ ನ ಶ್ರೀ ಆನಂದ್ ನಾಗರಾಜನ್ ಮತ್ತು ಬೇಕರ್ ಹ್ಯೂಸ್ ನ ಶ್ರೀ ಉನ್ನತ್ ಮಂಕಡ್ ನಡೆಸಿಕೊಟ್ಟರು. 

ತಾಂತ್ರಿಕ ಕಾರ್ಯಕ್ರಮಗಳ ಆಚೆಗೂ ಈ ವಿಚಾರ ಸಂಕಿರಣವು ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಉದ್ಯಮದ ವೃತ್ತಿಪರರ ನಡುವೆ ಪಠ್ಯಕ್ರಮದ ಪ್ರಸ್ತುತತೆ, ವಿಕಾಸಗೊಳ್ಳುತ್ತಿರುವ ಕೌಶಲದ ನಿರೀಕ್ಷೆಗಳು ಮತ್ತು ಸ್ಥಳದಲ್ಲಿನ ಕೈಗಾರಿಕಾ ವಾಸ್ತವಗಳ ಕುರಿತು ತೆರೆದ ಸಂವಹನಗಳನ್ನು ಹೊಂದಿತ್ತು. ಭಾಗವಹಿಸಿದವರು ಈ ಪ್ಲಾಟ್ ಫಾರಂ ಅನ್ನು ಈ ಕ್ಷೇತ್ರದ ಪರಿಣಿತರೊಂದಿಗೆ ಜಾಲ ನಿರ್ಮಿಸಿಕೊಳ್ಳಲು ಬಳಸಿಕೊಂಡರು, ಇದು ಡ್ರೋನ್ ತಂತ್ರಜ್ಞಾನದಲ್ಲಿ ಮತ್ತು ಸಂಬಂಧಿತ ಎಂಜಿನಿಯರಿಂಗ್  ಕ್ಷೇತ್ರಗಳ ಉದ್ಯಮದ ಸಂಪರ್ಕಿತ ಕಲಿಕೆಯ ಮೌಲ್ಯ ಕುರಿತು ಒತ್ತು ನೀಡಿತು. 

ಕಳೆದ ಎರಡು ವರ್ಷಗಳಿಂದಲೂ ಭಾರತದಲ್ಲಿ ಎಂಇಇಡಿ ಸಮ್ಮೇಳನಗಳು ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ನಡುವಿನ ಅಂತರ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅದಕ್ಕೆ ಎಂಇಇಡಿ ಇಂಡಿಯಾ ಸ್ಟೀರಿಂಗ್ ಕಮಿಟಿ ಬೆಂಬಲಿಸಿದೆ, ಇದರಲ್ಲಿ ಉದ್ಯಮ ನಾಯಕರು, ಕುಲಪತಿಗಳು ಮತ್ತು ಮುಂಚೂಣಿಯ ಸಂಶೋಧಕರು ಇದ್ದಾರೆ. ಈ ವಿಚಾರ ಸಂಕಿರಣಕ್ಕೆ ತಂತ್ರಜ್ಞಾನ ಮತ್ತು ಉದ್ಯಮದ ಪಾಲುದಾರರ ಬೆಂಬಲ ಪಡೆದಿದ್ದು ಅದರಲ್ಲಿ ಅನ್ಸಿಸ್ (ಸಿನಾಪ್ಸಿಸ್ ಅಂಗ), ಇನ್ಫಿನಿಪಾಯಿಂಟ್ ಟೆಕ್ನಾಲಜೀಸ್ ಮತ್ತು ಮ್ಯಾಥ್ ವರ್ಕ್ಸ್ ಒಳಗೊಂಡಿದ್ದು ಅದು ಅನ್ವಯಿಕ ಕಲಿಕೆಗೆ, ಎಐ-ಪ್ರೇರಿತ ಎಂಜಿನಿಯರಿಂಗ್ ವರ್ಕ್ ಫ್ಲೋಗಳು ಮತ್ತು ವೃತ್ತಿ-ಕೇಂದ್ರಿತ ಕೌಶಲ್ಯಾಭಿವೃದ್ಧಿಗೆ ಕಾರ್ಯಕ್ರಮದ ಆದ್ಯತೆಯನ್ನು ಸದೃಢಗೊಳಿಸಿದೆ.

 

About ASME Foundation India  

ASME Foundation India is the philanthropic arm of the American Society of Mechanical Engineers (ASME) in India. It works to create access to quality engineering education, empower underserved and underrepresented students with STEM education, and enable engineering-led solutions for societal good. Through scholarships, student programs, experiential learning initiatives, and partnerships with academic and industry institutions, ASME Foundation India is committed to building a brighter, more equitable future where engineering excellence drives meaningful societal progress. For more information, visit www.asmefoundationindia.org.

About REVA University:  

Established in 2012, REVA University is a forerunner in delivering technology-based education.  Recognised as one of the Top 50 private universities in India, REVA University, with innovative  pedagogy, exemplary infrastructure, and an industry-resilient curriculum that is designed for the  future job market, strives to benchmark new milestones in modern education. In less than two  decades, the University has grown from a small community of 150 students to a vast institution  that is educating and empowering 15,000+ students on campus.  

More Like This
February 17, 2025
ರೆವಾ ಯೂನಿವರ್ಸಿಟಿಯಲ್ಲಿ ನಡೆದ ಡ್ರೋನ್ ತಂತ್ರಜ್ಞಾನದ ಕುರಿತಾದ ಎ.ಎಸ್.ಎಂ.ಇ. ಎಂಜಿನಿಯರಿಂಗ್ ಶಿಕ್ಷಣದ ವಿಚಾರ ಸಂಕಿರಣದಲ್ಲಿ ಉದ್ಯಮಕ್ಕೆ ಸನ್ನದ್ಧ ಎಂಜಿನಿಯರಿಂಗ್ ಕಲಿಕೆಗೆ ಒತ್ತು
ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಮಿಟ್(MEEd) ಭಾಗವಾಗಿ ರೆವಾ ಯೂನಿವರ್ಸಿಟಿಯಲ್ಲಿ ಡ್ರೋನ್ ತಂತ್ರಜ್ಞಾನದ ಎ.ಎಸ್.ಎಂ.ಇ. ಎಂಜಿನಿಯರಿಂಗ್ ಶಿಕ್ಷಣ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ನಡೆಸಲಾಗಿದ್ದು ಇದು ತರಗತಿಯ ಕಲಿಕೆ ಮತ್ತು ಉದ್ಯಮದ ನೇತೃತ್ವದ ಡ್ರೋನ್ ಬಳಕೆಯ ನಡುವಿನ ಅಂತರ ತುಂಬಲು ಆದ್ಯತೆ ನೀಡಿತ್ತು. ವೈಮಾನಿಕ, ಉತ್ಪಾದನೆ ಮತ್ತು ಡೀಪ್-ಟೆಕ್ ಆವಿಷ್ಕಾರದ ವೃದ್ಧಿಸುತ್ತಿರುವ ಕೇಂದ್ರವಾದ ಬೆಂಗಳೂರಿನಲ್ಲಿ ಆಯೋಜಿಸಲಾದ ಈ ವಿಚಾರ ಸಂಕಿರಣವು ನಿಜ-ಜೀವನದ ಬಳಕೆ, ನಿಯಂತ್ರಣದ ಅಗತ್ಯಗಳು ಮತ್ತು ಡ್ರೋನ್ ಇಕಿಸೊಸ್ಟಂನಲ್ಲಿ ಉದ್ಯಮ ಪ್ರೇರಿತ ಬಳಕೆಯ ಪ್ರಕರಣಗಳಿಗೆ ಪೂರಕವಾಗಿ ಹೇಗೆ ಎಂಜಿನಿಯರಿಂಗ್ ಶಿಕ್ಷಣವು ವಿಕಾಸಗೊಳ್ಳಬೇಕು ಎನ್ನುವುದಕ್ಕೆ ಆದ್ಯತೆ ನೀಡಿತು.
Press Release
SUBSCRIBE TO FOUNDATION FORWARD
Our quarterly newsletter with insights and updates from the ground
Thank you! Your submission has been received!
Oops! Something went wrong while submitting the form.
By submitting this information, you agree to receive marketing emails from ASME Foundation and accept our privacy policy. You can opt-out at any time.